ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿ., ಕುಮಟಾ.
ಕರ್ನಾಟಕ ರಾಜ್ಯದ ಸಹಕಾರ ಚಳುವಳಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪರಿಮಿತವಾಗಿದ್ದು ಜಿಲ್ಲೆಯಲ್ಲಿ ಸಹಕಾರ ಶಿಕ್ಷಣ ನೀಡುವಿಕೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ನಿನ ಕಾರ್ಯ ತತ್ಪರತೆ ಅನನ್ಯವಾಗಿದೆ.ಸಹಕಾರ ಪ್ರಚಾರ, ಸಹಕಾರ ಸಂಸ್ಥೆಗಳ ಪದಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಹಕಾರಿ ಆಡಳಿತ ಹಾಗೂ ಸಹಕಾರಕ್ಕೆ ಸಂಬಂಧಪಟ್ಟ ವಿವಿಧ ವಿಷಯಗಳ ಕುರಿತು ಕಾಲಕಾಲಕ್ಕೆ ತರಬೇತಿ ವ್ಯವಸ್ಥೆ ಮಾಡಿ ಸಹಕಾರಿಗಳ ಕಾರ್ಯ ದಕ್ಷತೆ ಉನ್ನತೀಕರಿಸುವ ಕಾರ್ಯವನ್ನು ಜಿಲ್ಲಾ ಸಹಕಾರ ಯೂನಿಯನ್ ಮಾಡುತ್ತಲಿದೆ. ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಇದು ದಿನಾಂಕ: 05-04-1937 ರಲ್ಲಿ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಸುಪರ್‌ವೈಸಿಂಗ್ ಬೋರ್ಡ ಕುಮಟಾ ಎಂಬ ನಾಮಕರಣದೊಂದಿಗೆ ಅಂದಿನ ಮುಂಬೈ ಪ್ರಾಂತ್ಯ ರಾಜ್ಯದ ಸಹಕಾರಿ ಕಾಯಿದೆ ಅನ್ವಯ ನೋಂದಣಿ ಆಗಿದ್ದು ಈ ಸಂಸ್ಥೆ ಆ ಕಾಲದಲ್ಲಿ ಸ್ಥಳಿಕ ಸಂಸ್ಥೆಯಂತೆ ಕಾರ್ಯ ನಿರ್ವಹಿಸುತ್ತಾ ಬಂದಿದೆ.