ಸಹಕಾರ ತರಬೇತಿ ಕೇಂದ್ರಗಳು:
ಕರ್ನಾಟಕದಲ್ಲಿ 1956-57 ರವರೆಗೆ ರಾಜ್ಯ ಸರ್ಕಾರದ ಅಧೀನಲ್ಲಿದ್ದ ಸಹಕಾರಿ ತರಬೇತಿ ಕೇಂದ್ರಗಳನ್ನು ಅಂದಿನ ರಾಜ್ಯ ಸಹಕಾರ ಯೂನಿಯನ್ ಆಡಳಿತಕ್ಕೆ ವರ್ಗಾವಣೆ ಮಾಡಲಾಯಿತು. ಆವರೆಗೆ ಕೇವಲ ಲೆಕ್ಕಪರಿಶೋಧನಾ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿತ್ತು. ಕ್ರಮೇಣ ಇಡೀ ಸಹಕಾರ ಕ್ಷೇತ್ರದ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲು ತರಬೇತಿ ಕೇಂದ್ರಗಳನ್ನು ಸಜ್ಜುಗೊಳಿಸಲಾಯಿತು.ಕನಾ೯ಟಕ ರಾಜ್ಯ ಸಹಕಾರ ಮಹಾಮಂಡಳದ ಸಹಯೋಗದಲ್ಲಿ 8 ಸಹಕಾರ ತರಬೇತಿ ಕೇಂದ್ರಗಳು (ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್) ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಹೆಸರಿನಡಿ 6 ತಿಂಗಳುಗಳ ಸಹಕಾರ ತರಬೇತಿ ನೀಡುತ್ತಿವೆ.
8 ಸಹಕಾರ ತರಬೇತಿ ಕೇಂದ್ರಗಳು ಈ ಕೆಳಗಿನಂತಿವೆ:
ಧಾರವಾಡ, ಮಡಿಕೇರಿ, ಮೈಸೂರು, ಕಲಬುರ್ಗಿ,ಬೆಂಗಳೂರು,ಶಿವಮೊಗ್ಗ,ಮೂಡುಬಿದಿರೆ, ಬೆಳಗಾವಿ
ಈ ತರಬೇತಿಯಲ್ಲಿ ನಿರುದ್ಯೋಗಿ ಯುವ ಜನರಿಗೆ ,ಲೆಕ್ಕಪರಿಶೋಧನಾ ಇಲಾಖೆ ಹಾಗೂ ಸಹಕಾರ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1000 ಸಿಬ್ಬಂದಿಗಳಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರಿಗೆ ವಿಶೇಷ ಅಧಿವೇಶನಗಳ ಮೂಲಕ ಸಹಕಾರ ತರಬೇತಿ ನೀಡಲಾಗುತ್ತಿದೆ. ಅಭ್ಯರ್ಥಿಗಳಿಗೆ ಶಿಷ್ಯ ವೇತನವನ್ನು ನೀಡುವ ವ್ಯವಸ್ಥೆಯು ಇರುತ್ತದೆ. ಇವು ಪ್ರತಿವರ್ಷ 2 ತಂಡಗಳಲ್ಲಿ ಸುಮಾರು 800 ಸಿಬ್ಬಂದಿಗಳು ಡಿಪ್ಲೊಮಾ ಪದವಿ ಪಡೆಯುತ್ತಿದ್ದಾರೆ. ಪ್ರಸ್ತುತ ವರ್ಷ ಕೋವಿಡ್-19ರ ಕಾರಣಗಳಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ದೂರ ಶಿಕ್ಷಣ ಅಭ್ಯರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಿರಂತರವಾಗಿ ಏರ್ಪಡಿಸಲಾಗುತ್ತಿದೆ.
ದೂರ ಶಿಕ್ಷಣ ಸಹಕಾರ ತರಬೇತಿ:
ರಾಜ್ಯದ ಸಹಕಾರ ಸಂಘಗಳ ಸಿಬ್ಬಂದಿಯ ಮನವಿಯ ಮೇರೆಗೆ 2018-19ರ ಸಾಲಿನಿಂದ ಸಹಕಾರ ಡಿಪ್ಲೊಮಾ ತರಬೇತಿಯಲ್ಲಿ ದೂರಶಿಕ್ಷಣ ಸಹಕಾರ ತರಬೇತಿ ಆರಂಭಿಸಲಾಗಿದೆ. ಈ ಯೋಜನೆಯಡಿ ಅಭ್ಯರ್ಥಿಗಳಿಗೆ ತರಬೇತಿಯ ಬಗ್ಗೆ ಮಾಹಿತಿಯನ್ನು ಒದಗಿಸಿ, ಅಗತ್ಯವಾದ ಅಧ್ಯಯನ ಸಾಹಿತ್ಯ ಸಾಹಿತ್ಯವನ್ನು ತಲುಪಿಸಿ, ನಂತರ ಅಭ್ಯರ್ಥಿಗಳಿಗೆ ಸಂಪರ್ಕ ತರಗತಿಗಳ ಮೂಲಕ ತರಬೇತಿ ನೀಡಿ ಅವರುಗಳನ್ನು 6 ತಿಂಗಳ ನಂತರ ಪರೀಕ್ಷೆಗೆ ಸಿದ್ದರಾಗುವಂತೆ ಮಾಡಲಾಗುತ್ತದೆ. ಇದುವರೆಗೂ ಈ ಕೆಳಕಂಡಂತೆ ದೂರಶಿಕ್ಷಣ ಸಹಕಾರ ತರಬೇತಿ ಪ್ರಯೋಜನ ಪಡೆದಿರುತ್ತಾರೆ.
ರಾಜ್ಯ ಸಹಕಾರ ಮಹಾಮಂಡಳದ ಈ ವಿಶೇಷ ಯೋಜನೆಯಡಿ ಸಹಕಾರ ಸಂಸ್ಥೆಗಳು 6 ತಿಂಗಳ ಕಾಲ ತಮ್ಮ ಸಿಬ್ಬಂದಿಗಳನ್ನು ತರಬೇತಿಗೆ ನಿಯೋಜಿಸಬೇಕಾದ ಅಗತ್ಯವಿರುವುದಿಲ್ಲ. ಇದರಿಂದ ಹೆಚ್ಚಿನ ಸಂಖ್ಯೆಯ ಅಧಿಕಾರಿ/ಸಿಬ್ಬಂದಿಗಳಿಗೆ ಸಹಕಾರ ಡಿಪ್ಲೊಮಾ ತರಬೇತಿ ನೀಡಲು ಸಾಧ್ಯವಾಗಲಿದೆ. ಸಹಕಾರ ತರಬೇತಿ ಪಡೆದ ಸಿಬ್ಬಂದಿಗಳಿಂದ ಸಂಸ್ಥೆಗಳು ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಸಹಕಾರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳು ಮುಂದಿನ ಹುದ್ದೆಗೆ ಬಡ್ತಿ ಹೊಂದಬೇಕಾದಲ್ಲಿ ಡಿ.ಸಿ.ಎಂ. ತೇರ್ಗಡೆ ಕಡ್ಡಾಯ ಮಾಡಲಾಗಿದೆ.
ಪ್ರಸ್ತುತ ವಾರ್ಷಿಕ ಎರಡು ಕಂತುಗಳಲ್ಲಿ 3 ಸಾವಿರಕ್ಕೂ ಹೆಚ್ಚು ಅಧಿಕಾರಿ/ಸಿಬ್ಬಂದಿಗಳು ತೇರ್ಗಡೆಯಾಗುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಗಳಿಗೆ ದೂರಶಿಕ್ಷಣ ತರಬೇತಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.