ಉತ್ತರ ಕನ್ನಡ ಜಿಲ್ಲೆಯು ಪ್ರಾಕೃತಿಕವಾಗಿ ಜೀವ ವೈವಿದ್ಯತೆಯನ್ನು ಸಾಮಾಜಿಕವಾಗಿ ಸೌಹಾದ೯ತೆಯನ್ನು ಸಾಧಿಸಿದ ಜಿಲ್ಲೆಯಾಗಿದ್ದು ಸ್ವಾತಂತ್ರ್ಯಾಪೂವ೯ದಿಂದಲೂ ಇಲ್ಲಿಯ ಜನರು ಸಹಕಾರ ಚಳುವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಲೇ ಬಂದಿದ್ದಾರೆ.ಇಲ್ಲಿಯ ಜನ ಜೀವನದ ವ್ಯವಸ್ಥೆಯಲ್ಲಿ ಸಹಕಾರವು ಹಾಸುಹೊಕ್ಕಾಗಿದೆ.ಇಲ್ಲಿಯ ನೆಲ ಅನೇಕ ಶ್ರೇಷ್ಠ ಸಹಕಾರ ಸಂಘಗಳಿಗೆ ತವರು ನೆಲವಾಗಿದ್ದು ಇಲ್ಲಿ ಕೃಷಿ,ಹೈನುಗಾರಿಕೆ,ಮೀನುಗಾರಿಕೆ,ಸಂಸ್ಕರಣ ಹಾಗೂ ಪತ್ತಿನ ಸಹಕಾರ ಸಂಘಗಳು ಇಲ್ಲಿ ಅಭಿವೃದ್ಧಿಯನ್ನು ಸಾಧಿಸಿವೆ.
ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿ ಕುಮಟಾ ಈ ಸಂಸ್ಥೆಯು ಜಿಲ್ಲೆಯ ಎಲ್ಲ ಜನರಿಗೆ ಸಹಕಾರ ತತ್ವದ ಬಗ್ಗೆ ಜಾಗೃತಿ ಮೂಡಿಸುವದರೊಂದಿಗೆ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳ ಸವ೯ತೋಮುಖ ಅಭಿವೃದ್ಧಿಗೆ ಅಗತ್ಯ ಇರುವ ತರಬೇತಿ ಹಾಗೂ ಶಿಕ್ಷಣವನ್ನು ಕಾಲಕಾಲಕ್ಕೆ ಒದಗಿಸುವ ಸಂಸ್ಥೆಯಾಗಿದೆ.ಈ ಸಂಸ್ಥೆಯ ಮೂಲಕ ಜಿಲ್ಲಾ ಮಟ್ಟದ,ರಾಜ್ಯ ಮಟ್ಟದ,ಕ್ಲಸ್ಟರ್ ಮಟ್ಟದ ಕಾರ್ಯಕ್ರಮಗಳನ್ಫ್ನು ಆಯೋಜಿಸಿ ನಾವು ಜಿಲ್ಲೆಯ ಸಹಕಾರಿಗಳಿಗೆ ಅಗತ್ಯ ಇರುವ ಸಹಕಾರ ಕ್ಷೇತ್ರದ ಕುರಿತಾದ ಅದರ ಪ್ರಗತಿಗೆ ಪೂರಕವಾದ ಮಾಹಿತಿಯನ್ನು ನಾವು ಒದಗಿಸುತ್ತಾ ಬಂದಿದ್ದೇವೆ.
ಶಾಲಾ ಕಾಲೇಜು ವಿದ್ಯಾಥಿ೯ಗಳಿಗೆ ಸಹಕಾರದ ಕುರಿತು ಚಚಾ೯-ಪ್ರಬಂಧ ಸ್ಪಧೆ೯ಯನ್ನು ಹಮ್ಮಿಕೊಂಡು ಅವರಿಗೆ ಈ ಕ್ಷೇತ್ರದ ಅರಿವನ್ನು ಮೂಡಿಸಲಾಗುತ್ತಿದೆ.ಕನಾ೯ಟಕ ರಾಜ್ಯ ಸಹಕಾರ ಮಹಾಮಂಡಳವು ನಮ್ಮ ಯೂನಿಯನ್ನಿಗೆ ಅಗತ್ಯ ಇರುವ ಆಥಿ೯ಕ ನೆರವನ್ನು ಒದಗಿಸುತ್ತಾ ಬಂದಿರುತ್ತದೆ.ಅದರ ನೆರವಿನೊಂದಿಗೆ ನಮ್ಮ ನಿದೇ೯ಶಕರ ಮಂಡಳಿಯ ಹಾಗೂ ಹಿರಿಯ ಸಹಕಾರಿ ಸದಸ್ಯರ ಅನುಭವ ವೇದ್ಯವಾದ ಸಲಹೆ ಸೂಚನೆಗಳನ್ನು ಪರಿಗಣಿಸಿ ಸಹಕಾರ ಕ್ಷೇತ್ರದ ಅಧಿಕೃತ ಮಾಹಿತಿ ಕೇಂದ್ರವಾಗಿ ಜಿಲ್ಲಾ ಸಹಕಾರ ಯೂನಿಯನ್ ಇಂದು ರೂಪುಗೊಂಡಿದೆ.
ವಷ೯ಂಪ್ರತಿ ನವೆಂಬರ ೧೪ ರಿಂದ ೨೦ ರವರೆಗೆ ದಿವಂಗತ ಜವಾಹರ ಲಾಲ ನೆಹರುರವರ ಜನ್ಮ ದಿನದ ಪ್ರಯುಕ್ತ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಜಿಲ್ಲೆಯಲ್ಲಿ ಯೂನಿಯನ್ನಿನ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದ್ದು ಈ ಸಪ್ತಾಹದಲ್ಲಿ ಶ್ರೇಷ್ಠ ಸಹಕಾರಿಗಳನ್ನು ಗುರುತಿಸಿ ಅವರಿಗೆ “ಶ್ರೀ ಎನ್.ಪಿ.ಗಾಂವಕರ ದತ್ತಿ ನಿಧಿ”ಯಿಂದ ಸನ್ಮಾನವನ್ನು ಮಾಡಲಾಗುತ್ತಿದೆ.
ಕನಾ೯ಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ಧಾರವಾಡದಿಂದ ಆಯೋಜಿಸಲಾಗುತ್ತಿರುವ ಡಿ.ಸಿ.ಎಮ್ ಕೋಸು೯ಗಳಿಗೆ ನಮ್ಮ ಜಿಲ್ಲೆಯಿಂದ ಭಾಗವಹಿಸುವ ವಿದ್ಯಾಥಿ೯ಗಳಿಗೆ ಯೂನಿಯನ್ನಿಂದ ಅಪ್ಲಿಕೇಷನ್ ಫಾಮ್೯ಗಳನ್ನು ಶುಲ್ಕ ಸಹಿತ ವಿತರಿಸುವ ವ್ಯವಸ್ಥೆಯನ್ನು ಯೂನಿಯನ್ ನಿಂದ ಹಮ್ಮಿಕೊಳ್ಳಲಾಗುತ್ತದೆ.ಒಟ್ಟಿನಲ್ಲಿ ಜಿಲ್ಲೆಯಲ್ಲಿ ಸಹಕಾರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಯೂನಿಯನ್ ಸಕ್ರೀಯವಾಗಿದ್ದು ಯೂನಿಯನ್ನಿನ ಕಾರ್ಯಕ್ರಮಗಳಿಗೆ ತಾವೆಲ್ಲರೂ ಭಾಗವಹಿಸುವದರೊಂದಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ನಿದೇ೯ಶಕರ ಮಂಡಳಿ: